Annabhagya Yojana Good News : ಅನ್ನಭಾಗ್ಯ ಯೋಜನೆಯ ಮತ್ತೊಂದು ಸಿಹಿ ಸುದ್ದಿ ? ಹಣದ ಬದಲಾಗಿ ದಿನಸಿ ಕಿಟ್ ವಿತರಣೆ! ಇಲ್ಲಿದೆ ನೋಡಿ ಮಾಹಿತಿ.
ಸಮಸ್ತ ಕರ್ನಾಟಕ ಜನತೆಯ ನಮಸ್ಕಾರಗಳು ಇದೀಗ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿನೆಂದರೆ ಈಗ ನಿಮಗೆಲ್ಲರಿಗೂ ತಿಳಿದಿರುವಂತೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಈಗ 5 ಕೆಜಿ ಅಕ್ಕಿ ದೊರೆಯುತ್ತಿತ್ತು. ಹಾಗೆಯೇ ಐದು ಕೆಜಿ ಅಕ್ಕಿ ಹಣವನ್ನು ನೀಡುತ್ತಿತ್ತು. ಆದರೆ ಈಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರಾದಂತಹ ಕೆಎಚ್ ಮುನಿಯಪ್ಪ ಅವರು ನೀಡಿರುವ ಮಾಹಿತಿ ಪ್ರಕಾರ ಈಗ ಈ ಯೋಜನೆ ಮೂಲಕ ಬದಲಾಗಿ ದಿನಸಿ ಕಿಟ್ ಅನ್ನು ವಿತರಣೆ ಮಾಡುವ ಯೋಜನೆಯನ್ನು ಮಾಡಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಈಗ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಅನ್ನಭಾಗ್ಯ ಯೋಜನೆಯ ವಿವರ
ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 10 ಕೆಜಿ ಅಕ್ಕಿಯನ್ನು ನೀಡುವ ಗುರಿಯನ್ನು ಇಟ್ಟುಕೊಂಡು ಈ ಒಂದು ಯೋಜನೆಯನ್ನು ಜಾರಿಗೆ ಮಾಡಿತು. ಅದರಂತೆ ಈಗ ಸರ್ಕಾರ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ಈಗ ನೇರವಾಗಿ ಜಮಾ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲದೆ ಈ ಹಿಂದೆ ಅಡುಗೆ ಎಣ್ಣೆ ,ಜೋಳ, ಸಕ್ಕರೆ, ಉಪ್ಪು ಮುಂತಾದ ಪದಾರ್ಥಗಳನ್ನು ನೀಡಲಾಗುತ್ತಿತ್ತು. ಅದನ್ನೀಗ ಮತ್ತೆ ವಿತರಣೆ ಮಾಡಲು ಸಹ ಇಲಾಖೆಯೂ ಆರ್ಥಿಕ ಇಲಾಖೆಯ ಪ್ರಸ್ತಾವನೆಯನ್ನು ನೀಡಿದೆ ಎಂದು ಮಾಹಿತಿ ತಿಳಿದು ಬಂದಿದೆ. ಅದೇ ರೀತಿಯಾಗಿ ಈ ಎಲ್ಲಾ ಆಹಾರ ಧಾನ್ಯಗಳನ್ನು ವಿತರಣೆ ಅಕ್ಟೋಬರ್ 1 ನೇ ತಾರೀಖಿನಿಂದ ಜಾರಿಗೆ ಮಾಡಲಾಗುವುದು ಎಂಬ ಮಾಹಿತಿಯನ್ನು ನೀಡಿದ್ದಾರೆ.
ಇದೀಗ ಕೇಂದ್ರ ಸರ್ಕಾರವು ನೀಡುತ್ತಿರುವಂತ ಐದು ಕೆಜಿ ಅಕ್ಕಿಯನ್ನು ಹೊರತುಪಡಿಸಿ ರಾಜ್ಯ ಸರ್ಕಾರ ಇನ್ನು ಐದು ಕೆಜಿ ಅಕ್ಕಿ ಬದಲಿಗೆ ಒಂದು ಕೆಜಿ ಅಕ್ಕಿಗೆ 34 ರೂಪಾಯಿ ಅಂತೆ 5 ಕೆಜಿ ಅಕ್ಕಿಗೆ ಈಗ 170 ಹಣವನ್ನು ಫಲಾನುಭವಿಗಳ ಖಾತೆಗಳಿಗೆ ಈಗಾಗಲೇ ಮಾಡುತ್ತಿತ್ತು. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಒಪ್ಪಿದ ಹಾಗೆ ಪ್ರತಿ ಕೆಜಿಗೆ ಅಕ್ಕಿಗೆ 34 ರೂಪಾಯಿ ದರದಲ್ಲಿ ಅಕ್ಕಿಯನ್ನು ಪೂರೈಸುತ್ತಿತ್ತು. ಹಾಗೆ ಇನ್ನು ಮುಂದೆ ಐದು ಕೆಜಿ ಅಕ್ಕಿ ಹಣದ ಬದಲಾಗಿ ಅಕ್ಕಿಯನ್ನು ನೀಡುವ ಭರವಸೆಯನ್ನು ಈಗ ರಾಜ್ಯ ಸರ್ಕಾರ ಮತ್ತೆ ಈಡೇರಿಸುತ್ತದೆ. ಈ ಒಂದು ಅಕ್ಕಿಯನ್ನು ವಿತರಣೆ ಮಾಡುವುದನ್ನು ಈಗ ಅಕ್ಟೋಬರ್ 1 ನೇ ತಾರೀಕಿನಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ನೀಡುವ ಸಾಧ್ಯತೆ ಇದೆ ಎಂದು ಮಾಹಿತಿಯನ್ನು ನೀಡಿದ್ದಾರೆ.
ಈಗ ಆಹಾರ ಇಲಾಖೆ ಸಚಿವರಾದಂತ ಕೆಎಚ್ ಮುನಿಯಪ್ಪ ಅವರು ನೀಡಿರುವ ಮಾಹಿತಿ ಪ್ರಕಾರ ಅಕ್ಟೋಬರ್ 1 ನೇ ತಾರೀಖಿನಂದು ದಿನ ನಿತ್ಯ ಬಳಸುವಂತಹ ವಸ್ತುಗಳಾದ ಅಡುಗೆ ಎಣ್ಣೆ, ಸಕ್ಕರೆ , ಉಪ್ಪು ಮುಂತಾದ ವಸ್ತುಗಳನ್ನು ವಿತರಣೆ ಮಾಡುವ ಸಾಧ್ಯತೆ ಇದೆ ಎಂದು ಮಾಹಿತಿಯನ್ನು ನೀಡಿದ್ದಾರೆ,
ಇದನ್ನು ಓದಿ : Zilla Panchayata Requerment : ಜಿಲ್ಲಾ ಪಂಚಾಯತ್ ಖಾಲಿ ಹುದ್ದೆಗಳಿಗೆ ಈಗ ಭರ್ಜರಿ ನೇಮಕಾತಿ ? ಈಗಲೇ ಅರ್ಜಿಯನ್ನು ಸಲ್ಲಿಸಿ.
ಸ್ನೇಹಿತರೆ ನಾವು ಈಗ ನಿಮಗೆ ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದ್ದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ, ನೀವು ಈ ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು,