Ganga Kalyana Yojana : ರೈತರಿಗೆ ಈಗ ಗಂಗಾ ಕಲ್ಯಾಣ ಉಚಿತ ಬೋರ್ವೆಲ್ ಪಡೆಯಲು ಅರ್ಜಿ ಆಹ್ವಾನ ? ಈ ರೀತಿಯಾಗಿ ಅರ್ಜಿಯನ್ನು ಸಲ್ಲಿಸಿ ? ಇಲ್ಲಿದೆ ಸಂಪೂರ್ಣವಾದ ಮಾಹಿತಿ.
ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು ನಾವೀಗ ಈ ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ 2024 – 25 ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತವಾಗಿ ಬೋರ್ವೆಲ್ಗಾಗಿ ರಾಜ್ಯ ಸರ್ಕಾರ ವಿವಿಧ ನಿಗಮ ಮೂಲಕ ರೈತರಿಂದ ಅರ್ಜಿಗಳನ್ನು ಪ್ರಾರಂಭ ಮಾಡಲಾಗಿದೆ. ಯಾವೆಲ್ಲ ಜಾತಿಯ ರೈತರು ಈ ಸೌಲಭ್ಯವನ್ನು ಪಡೆದಿರುತ್ತಾರೆ ಹಾಗೂ ಅರ್ಹತೆ ಮಾನದಂಡಗಳು ಏನು ಮತ್ತು ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳನ್ನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.
ಈಗ ರಾಜ್ಯ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರ ಅಭಿವೃದ್ಧಿಗಾಗಿ ಇಂತಹ ಯೋಜನೆಗಳನ್ನು ಈಗ ಜಾರಿಗೆ ತಂದಿದೆ. ಈಗ ಬೇರೆಯವರಿಗೆ ಅನುಕೂಲಕ್ಕಾಗಿ ವಿವಿಧ ನಿಗಮಗಳ ಮುಖಾಂತರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈಗ ಉಚಿತ ಬೋರ್ವೆಲ್ ಯೋಜನೆಗಳ ಪೈಕಿಯಾಗಿ ಈ ಗಂಗಾ ಕಲ್ಯಾಣ ಯೋಜನೆಯ ಅತ್ಯಂತ ಜನಪ್ರಿಯವಾಗಿದೆ ಎಂದು ನಾವೆಲ್ಲರೂ ಹೇಳಬಹುದಾಗಿದೆ. ಅಷ್ಟೇ ಅಲ್ದೆ ಈ ಯೋಜನೆಯ ಮೂಲಕ ರೈತರು ನೀರಾವರಿ ಅನುಕೂಲ ಆದಾಯವನ್ನು ಗಳಿಸಬಹುದಾಗಿದೆ.
ನೀವು ದಿನನಿತ್ಯ ಇದೇ ತರಹ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮವನ್ನು ನೀವು ದಿನನಿತ್ಯ ಭೇಟಿ ನೀಡಿ. ನಾವು ನಮ್ಮ ಮಾಧ್ಯಮದ ದಿನ ನಿತ್ಯ ರೈತರಿಗೆ ವಿದ್ಯಾರ್ಥಿಗಳಿಗೆ ಹಾಗೂ ಮಕ್ಕಳಿಗೆ ಸಹಾಯವಾಗುವಂತ ಎಲ್ಲ ರೀತಿಯ ಮಾಹಿತಿಯನ್ನು ಮಾಧ್ಯಮದಲ್ಲಿ ನೀಡುತ್ತೇವೆ. ಹಾಗೆ ಹುದ್ದೆಗಳಿಗೆ ಸಂಬಂಧಪಟ್ಟಂತಹ ಮಾಹಿತಿಗಳನ್ನು ಕೂಡ ನಾವು ನಮ್ಮ ಮಾಧ್ಯಮದಲ್ಲಿ ನೀಡುತ್ತಿರುತ್ತೇವೆ.
ಈ ಯೋಜನೆ ಮೂಲಕ ಎಷ್ಟು ಸಹಾಯಧನ ದೊರೆಯುತ್ತದೆ .
ಒಂದು ವೇಳೆ ನೀವೇನಾದರೂ ಈ ಯೋಜನೆಯ ಮೂಲಕ ಅಂತರ್ಜಲ ಕಡಿಮೆ ಆಗಿರುವಂತಹ ಬೆಂಗಳೂರಿ ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಿಗೆ ಘಟಕವನ್ನು ಈಗ 4.75 ಲಕ್ಷ ರೂಪಾಯಿಗೆ ಈಗ ಸರ್ಕಾರವು ನಿಗದಿ ಮಾಡಿದೆ. ಅದರಲ್ಲಿ ವಿದ್ಯುತ್ ಸೇರಿ 4.25 ಲಕ್ಷ ಸಹಾಯಧನವು ನಿಮಗೆ ದೊರೆಯುತ್ತದೆ. ನೀವು ಅವಶ್ಯಕತೆ ಇದ್ದರೆ 4 %ಬಡ್ಡಿಯ ದರದಲ್ಲಿ 50,000 ಸಾಲವನ್ನು ಕೂಡ ಮಂಜೂರು ಮಾಡಿಕೊಳ್ಳಬಹುದು.
ಈ ಯೋಜನೆಯ ಅರ್ಹತಾ ಮಾನದಂಡಗಳೇನು ?
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಈ ಹಿಂದೆ ಯಾವುದೇ ನೀರಾವರಿ ಸೌಲಭ್ಯವನ್ನು ಹೊಂದಿಲ್ಲದ ಸಣ್ಣ ಮತ್ತು ಅತಿ ಸಣ್ಣ ರೈತರು ಆಗಿರಬೇಕು ಅಂತವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹಾಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಯ ರೈತರಿಗೆ ಕನಿಷ್ಠ ಒಂದು ಎಕರೆಗೆ ಸರ್ಕಾರವು ನಿಗದಿ ಮಾಡಿದೆ. ಹಾಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುದ್ದೆಯನ್ನು ಹೊಂದಿರಬಾರದು. ಅವರ ವಾರ್ಷಿಕ ವರಮಾನವು 1.20 ಲಕ್ಷ ಮೀರಿರಬಾರದು.
ಆನಂತರ ಅವರ ಆಧಾರ್ ಕಾರ್ಡ್ ನಂಬರ್ ಜೋಡಣೆ ಇರುವಂತಹ ಬ್ಯಾಂಕ್ ಖಾತೆ ಹೊಂದಿರಬೇಕಾಗುತ್ತದೆ. ಒಂದು ವೇಳೆ ಈ ಮೊದಲೇ ನೀವು ಈ ಯೋಜನೆಯ ಪ್ರಯೋಜನನ್ನು ಪಡೆದುಕೊಂಡಿದ್ದರೆ. ಅಂತ ಅವರು ಮತ್ತೊಮ್ಮೆ ಈ ಸೌಲಭ್ಯ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು ?
- ರೇಷನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ರೈತರ ಆಧಾರ್ ಕಾರ್ಡ್
- ಸಣ್ಣ ಮತ್ತು ಅತಿ ಸಣ್ಣ ರೈತರ ದೃಢೀಕರಣ ಪತ್ರಗಳು
- ಜಮೀನಿನ ಪಹಣಿ
ಯಾವೆಲ್ಲ ಜಾತಿಯ ರೈತರು ಅರ್ಜಿ ಸಲ್ಲಿಸಬಹುದು ?
- ಉಪ್ಪಾರ ಸಮುದಾಯದ ರೈತರು
- ವಿಶ್ವಕರ್ಮ ಸಮುದಾಯದ ರೈತರು
- ಒಕ್ಕಲಿಗ ಸಮುದಾಯದ ರೈತರು
- ವೀರಶೈವ ಲಿಂಗಾಯತ ರೈತರು
- ಹಿಂದುಳಿದ ವರ್ಗದ ರೈತರು
- ಮಡಿವಾಳ ಸಮುದಾಯದ ರೈತರು
- ಕಾಡುಗೊಲ್ಲ ಸಮುದಾಯ ರೈತರು
- ಅಲೆಮಾರಿ ಮತ್ತು ಹರಿ ಅಲೆಮಾರಿ ಸಮುದಾಯ ರೈತರು
ನಾವು ಈ ಮೇಲೆ ತಿಳಿಸಿರುವಂತಹ ಎಲ್ಲ ರೈತರು ಕೂಡ ಈ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗೆ ನಾವು ಈ ಮೇಲೆ ನೀಡಿದಂತಹ ಎಲ್ಲಾ ದಾಖಲೆಗಳನ್ನು ನೀವು ಸರಿಯಾದ ರೀತಿಯಲ್ಲಿ ನೀಡುವುದರ ಮೂಲಕ ನಾವು ಕೆಳಗೆ ಸೂಚಿಸಿದಂತಹ ಆನ್ಲೈನ್ ಸೆಂಟ್ರಗಳಿಗೆ ಭೇಟಿ ನೀಡುವುದರ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಲಿಂಕ್ : https://sevasindhu.karnataka.gov.in/Sevasindhu/Kannada
ಹಾಗಿದ್ದರೆ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ?
ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನೀವು ನಿಮ್ಮ ಹತ್ತಿರ ಇರುವಂತಹ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್, ನಾಗರಿಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ. ನೀವು ಈ ಯೋಜನೆಗೆ ಬೇಕಾಗುವಂತಹ ಅಗತ್ಯ ದಾಖಲೆಗಳನ್ನು ನೀಡುವುದರ ಮೂಲಕ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ನಾವು ಈ ಮೇಲೆ ನೀಡಿರುವಂತಹ ಮಾಹಿತಿ ಇಷ್ಟವಾದರೆ ಇದನ್ನು ನಿಮ್ಮ ಹತ್ತಿರ ಇರುವಂತ ಸ್ನೇಹಿತರೊಂದಿಗೆ ಇದನ್ನು ಶೇರ್ ಮಾಡಿಕೊಳ್ಳುವುದನ್ನು ಮರೆಯಬೇಡಿ. ಈ ಲೇಖನವನ್ನು ನೀವು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.