Gruhalakshmi Yojana DBT Check : ಗೃಹಲಕ್ಷ್ಮಿ ಯೋಜನೆ 11 ಮತ್ತು 12ನೇ ಕಂತಿನ ಹಣ ಜಮಾ! DBT ಮೂಲಕ ಚೆಕ್ ಮಾಡಿಕೊಳ್ಳಿ ? ಇಲ್ಲಿದೆ ಮಾಹಿತಿ.
ನಮಸ್ಕಾರಗಳು ಸ್ನೇಹಿತರೆ ನಮ್ಮ ಈ ಹೊಸ ಲೇಖನಕ್ಕೆ ಎಲ್ಲರಿಗೂ ಸ್ವಾಗತ. ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳು 11 ಮತ್ತು 12ನೇ ಕಂತಿನ ಗೃಹಲಕ್ಷ್ಮಿ ಎಲ್ಲರೂ ಕೂಡ ಈಗ ಕಾದು ಕುಳಿತಿದ್ದಾರೆ. ಹಾಗೆ ಈಗ ನೀವು DBT ಮೂಲಕ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ ಇಲ್ಲವೇ ಎಂಬುದನ್ನು ನೀವು ಈಗ ಹೇಗೆ ತಿಳಿದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ಇದೆ.
ಹಾಗೆ ಮೊನ್ನೆ ನಡೆದಂತಹ ಜನಾಂದೋಲನ ಸಮಾವೇಶದಲ್ಲಿ ಭಾಗವಹಿಸಿ ಮಾಹಿತಿಯನ್ನು ನೀಡಿದಂತಹ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರು ಇಂದಿನಿಂದ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡುತ್ತೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಈಗ ಗೃಹಲಕ್ಷ್ಮಿ ಯೋಜನೆ ಎರಡು ತಿಂಗಳ ಹಣವನ್ನು 4000 ಹಣವು ಇಂದಿನಿಂದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಫಲಾನುಭವಿಗಳು ತಮ್ಮ ಮನೆಯಲ್ಲಿ ಕೂತು ಕೂಡ ತಮ್ಮ ಮೊಬೈಲ್ ನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರುವುದನ್ನು ಈಗ ನೀವು ನಿಮ್ಮ ಮೊಬೈಲ್ ನಲ್ಲಿಯೇ ಪರಿಶೀಲನೆಯನ್ನು ಮಾಡಿಕೊಳ್ಳಬಹುದು. ಇನ್ನು ಒಂದು ವಾರದ ಒಳಗಾಗಿ ಗೃಹಲಕ್ಷ್ಮಿ ಯೋಜನಾ ಹಣವು ನಿಮ್ಮ ಖಾತೆಗೆ ಬಂದು ತಲುಪುತ್ತದೆ ಎಂಬ ಮಾಹಿತಿ ತಿಳಿದಿದೆ.
ನೀವು ದಿನನಿತ್ಯ ಇದೇ ತರಹದ ಹೊಸ ಹೊಸ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮವನ್ನು ನೀವು ದಿನನಿತ್ಯ ಭೇಟಿ ನೀಡಿ. ಅಷ್ಟೇ ಅಲ್ಲದೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಗೆ ನೀವು ಜಾಯಿನ್ ಆಗಿ.
ಗೃಹಲಕ್ಷ್ಮಿ ಹಣ ಸ್ಟೇಟಸ್ ಚೆಕ್ ಮಾಡುವುದು ಹೇಗೆ ?
- ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಅಪ್ಲಿಕೇಶನ್ ಅನ್ನು ಮೊದಲಿಗೆ ಓಪನ್ ಮಾಡಿಕೊಳ್ಳಬೇಕು.
- ಆನಂತರ ಅದರಲ್ಲಿ DBT ಕರ್ನಾಟಕ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನೀವು ಆ DBT ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ಆ ಅಪ್ಲಿಕೇಶನ್ ನಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ನಿಮ್ಮ ಮೊಬೈಲ್ ಸಂಖ್ಯೆ ಅನ್ನು ಎಂಟರ್ ಮಾಡಬೇಕಾಗುತ್ತದೆ.
- ಆನಂತರ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಇರುವಂತಹ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ. ಅದನ್ನು ನೀವು ಅಲ್ಲಿ ಎಂಟರ್ ಮಾಡಬೇಕಾಗುತ್ತದೆ.
- ಆನಂತರ ನೀವು ನಾಲ್ಕು ಅಂಕಿಯ ಒಂದು ಕೋಡನ್ನು ರಚನೆ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನಿಮ್ಮ ಮುಂದೆ ಮುಖಪುಟದಲ್ಲಿ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣ ಮತ್ತು ಅನ್ನ ಭಾಗ್ಯ ಯೋಜನೆ ಹಣದ ಬಗ್ಗೆ ಸಂಪೂರ್ಣವಾದ ಮಾಹಿತಿ ನೀವು ತಿಳಿದುಕೊಳ್ಳಬಹುದು.
ಇದನ್ನು ಓದಿ : PM ಕಿಸಾನ್ ಫಲಾನುಭವಿಗಳು ಫೋನ್ ನಂಬರ್ ಅಪ್ಡೇಟ್ ಮಾಡಿಸುವುದು ಕಡ್ಡಾಯ! ಇಲ್ಲಿದೆ ಮಾಹಿತಿ.
ನೀವು ದಿನನಿತ್ಯ ಇದೇ ತರಹದ ಹೊಸ ಹೊಸ ಬಗ್ಗೆ ಹಾಗೂ ಹೊಸ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಗೆ ನೀವು ಜಾಯಿನ್ ಆಗಿ. ಏಕೆಂದರೆ ನಾವು ದಿನನಿತ್ಯ ಅದರಲ್ಲಿ ಎಲ್ಲ ಮಾಹಿತಿಯನ್ನು ನೀಡುತ್ತಿರುತ್ತೇವೆ. ಹಾಗೆ ಈ ಲೇಖನವನ್ನು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.