PM Usha Scholaship : PUC ಪಾಸಾದವರಿಗೆ ಕೇಂದ್ರ ಸರ್ಕಾರದ ಕಡೆಯಿಂದ 20,000 ವಿದ್ಯಾರ್ಥಿ ವೇತನ ! ಬೇಗನೆ ಅರ್ಜಿ ಸಲ್ಲಿಸಿ ? ಇಲ್ಲಿದೆ ಸಂಪೂರ್ಣವಾದ ಮಾಹಿತಿ.
ಸಮಸ್ತ ಕರ್ನಾಟಕ ಜನತೆಗೆ ನಮ್ಮ ಈ ಲೇಖನಕ್ಕೆ ಎಲ್ಲರಿಗೂ ಸ್ವಾಗತ .ಇದೀಗ ನಾವು ನಿಮಗೆ ಈ ಲೇಖನದಲ್ಲಿ ತಿಳಿಸುತ್ತಿರುವ ಮಾಹಿತಿ ಏನೆಂದರೆ ಪಿಯುಸಿ ಪಾಸ್ ಆಗಿದ್ದರೆ ನೀವು ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಿ 20 ಸಾವಿರ ಹಣವನ್ನು ನೀವು ಪಡೆದುಕೊಳ್ಳಬಹುದು. ಹಾಗಿದ್ದರೆ ಯಾವುದು ಆ ಸ್ಕಾಲರ್ಶಿಪ್ ಮತ್ತು ಅರ್ಜಿಯನ್ನು ಯಾರೆಲ್ಲ ಸಲ್ಲಿಸಬಹುದು ಮತ್ತು ಅರ್ಜಿಯನ್ನು ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ? ಹಾಗೆಯೇ ಯಾವ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕೆಂಬುದರ ಮಾಹಿತಿ ಈ ಲೇಖನದಲ್ಲಿ ಇದೆ.
ಸ್ನೇಹಿತರೆ ದಿನನಿತ್ಯವು ನೀವು ನಮ್ಮ ಮಾಧ್ಯಮವನ್ನು ಭೇಟಿ ನೀಡುವುದರ ಮೂಲಕ ಇಂತಹ ಹೊಸ ಹೊಸ ಎಲ್ಲಾ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬಹುದಾಗಿದೆ. ಅಂದರೆ ನಾವು ದಿನನಿತ್ಯವು ನಮ್ಮ ಮಾಧ್ಯಮದಲ್ಲಿ ರೈತರಿಗೆ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಸಹಾಯವಾಗುವಂತಹ ಎಲ್ಲ ರೀತಿಯ ಹೊಸ ಹೊಸ ಯೋಜನೆಗಳ ಬಗ್ಗೆ ಹಾಗೂ ಹುದ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ನೀಡುತ್ತಿರುತ್ತೇವೆ. ನೀವು ದಿನ ನಿತ್ಯ ನಮ್ಮ ಮಾಧ್ಯಮವನ್ನು ಭೇಟಿ ನೀಡಿ. ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಪಿಎಂ ಉಷಾ ವಿದ್ಯಾರ್ಥಿ ವೇತನದ ಮಾಹಿತಿ
ಸ್ನೇಹಿತರೆ ಇದೀಗ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದಂತಹ ವಿದ್ಯಾರ್ಥಿಗಳಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಅವರು ಉನ್ನತ ವ್ಯಾಸಂಗವನ್ನು ಮಾಡಲು ಬಯಸುವಂತಹ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನದ ಮೂಲಕ 20,000 ಹಣವನ್ನು ನೀಡಲಾಗುತ್ತಿದೆ. ನೀವು ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ಇದರ ಲಾಭವನ್ನು ಪಡೆದುಕೊಳ್ಳುವುದು ಉತ್ತಮ.
ಈಗ ಪಿಎಂ ಉಷಾ ವಿದ್ಯಾರ್ಥಿ ವೇತನವನ್ನು ದ್ವಿತೀಯ ಪಿಯುಸಿಯಲ್ಲಿ 80ರಷ್ಟು ಅಂಕವನ್ನು ಗಳಿಸಿದಂತಹ ವಿದ್ಯಾರ್ಥಿಗಳು ತಮ್ಮ ಮುಂದಿನ ಯಾವುದೇ ಪದವಿ ಕೋರ್ಸ್ ಗಳಲ್ಲಿ ಶಿಕ್ಷಣವನ್ನು ಮಾಡಲು ಬಯಸಿದರೆ ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವೆಚ್ಚ ಹಾಗೂ ಪುಸ್ತಕಗಳ ಮತ್ತು ಕಾಲೇಜು ಶುಲ್ಕ ಭರಿಸುವ ಉದ್ದೇಶದಿಂದ ಈ ವಿದ್ಯಾರ್ಥಿ ವೇತನವನ್ನು ಈಗ ಜಾರಿಗೆ ಮಾಡಿದ್ದಾರೆ.
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ?
- ನೀವೇನಾದರೂ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ವಿದ್ಯಾರ್ಥಿಯ ಹಿಂದಿನ ತರಗತಿಯಲ್ಲಿ ಅಂದರೆ ದ್ವಿತೀಯ ಪಿಯುಸಿಯಲ್ಲಿ 80% ಗಿಂತ ಹೆಚ್ಚಿನ ಅಂಕವನ್ನು ಅವರು ಪಡೆದಿರಬೇಕಾಗುತ್ತದೆ.
- ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸುವಂತ ವಿದ್ಯಾರ್ಥಿ ಯಾವುದಾದರೂ ಪದವಿಯನ್ನು ಶಿಕ್ಷಣ ಪಡೆಯುತ್ತಿರಬೇಕಾಗುತ್ತದೆ.
- ಹಾಗೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸುವ ವಿದ್ಯಾರ್ಥಿಯ ವಾರ್ಷಿಕ ಆದಾಯವು 1.50 ಲಕ್ಷದ ಒಳಗೆ ಇರಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳೇನು ?
- ಅಭ್ಯರ್ಥಿಯ ಆಧಾರ್ ಕಾರ್ಡ್
- ದ್ವಿತೀಯ ಪಿಯುಸಿ ಅಂಕಪಟ್ಟಿ
- ಪದವಿ ಮಾಡುತ್ತಿರುವ ಪ್ರಮಾಣ ಪತ್ರ
- ಇತ್ತೀಚಿನ ಭಾವಚಿತ್ರ
- ಮೊಬೈಲ್ ನಂಬರ್
- ಇಂದಿನ ತರಗತಿಗಳ ಅಂಕ ಪಟ್ಟಿಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಅರ್ಜಿಯನ್ನು ಸಲ್ಲಿಸುವುದು ಹೇಗೆ ?
ಸ್ನೇಹಿತರೆ ನೀವೇನಾದರೂ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬೇಕೆಂದು ಕೊಂಡಿದ್ದರೆ. ನೀವು ಎಲ್ಲಾ ದಾಖಲಾತಿಗಳನ್ನು ತೆಗೆದು ಇಟ್ಟುಕೊಳ್ಳಬೇಕಾಗುತ್ತದೆ. ನಂತರ ನೀವು ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡುವುದರ ಮೂಲಕ ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಧಿಕೃತ ವೆಬ್ ಸೈಟ್ ಲಿಂಕ್
ಎಲ್ಲ ವಿದ್ಯಾರ್ಥಿಗಳು ಕೂಡ ಈ ಪಿಎಂ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ, ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು. ನೀವು ದಿನನಿತ್ಯ ಇದೇ ತರಹದ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದ ನಮ್ಮ ಮಾಧ್ಯಮವನ್ನು ದಿನನಿತ್ಯವೂ ಭೇಟಿ ನೀಡಿ.